ಜಮೀನಿನ ಮಾಲೀಕರು ಅಥವಾ ಕಾನೂನುಬದ್ಧ ಅಭಿವೃದ್ಧಿದಾರರು ಕಂದಾಯ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ (ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಅಥವಾ ಡೆಪ್ಯೂಟಿ ಕಮಿಷನರ್ ರವರುಗಳಿಗೆ ಸಂದರ್ಭಾನುಸಾರ, ಭೂ ಪರಿವರ್ತಿಸಬೇಕಾಗಿರುವ ಪ್ರದೇಶವನ್ನು ಅವಲಂಭಿಸಿ) ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಕಂದಾಯ ಇಲಾಖೆಯ ಸಕ್ಷಮ ಪ್ರಾಧಿಕಾರವು ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ ಅಥವಾ ವಿವಿಧ ಬಳಕೆಗಳಿಗಾಗಿ (ವಸತಿ/ವಾಣಿಜ್ಯ/ಕೈಗಾರಿಕಾ/ಇತರೆ) ಭೂಮಿಯನ್ನು ಭೂ ಪರಿವರ್ತಿಸಲು ಅಭಿಪ್ರಾಯವನ್ನು ನೀಡುವಂತೆ ತಿಳಿಸಲಾಗುತ್ತದೆ. ಅನುಮೋದಿತ ಮಹಾಯೋಜನೆಯಲ್ಲಿ ನಿಗದಿಪಡಿಸಲಾಗಿರುವ ಭೂ ಉಪಯೋಗಗಳನ್ವಯ ಹಾಗೂ ವಲಯ ನಿಯಮಾವಳಿಗಳನ್ವಯ ಭೂ ಪರಿವತ೯ನೆಗೆ ಪರಿಗಣಿಸಲಾಗುತ್ತದೆ.
ಮೂಲ:ಹೊಸಕೋಟೆ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.