ಕನಾ೯ಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ, 1961 ರ ಅಡಿಯಲ್ಲಿ  ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ ಜಮೀನುಗಳ  ಭೂ ಬಳಕೆಯನ್ನು ಬದಲಾಯಿಸಲು ಬಯಸುವ ಎಲ್ಲಾ ಅಜಿ೯ದಾರರುಗಳು ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಅಜಿ೯ ಸಲ್ಲಿಸಬೇಕಾಗಿರುತ್ತದೆ. 
1. ಅನುಮೋದಿತ ಮಾಸ್ಟರ್ ಪ್ಲಾನ್ ನಲ್ಲಿ ಮೀಸಲಿಟ್ಟಿರುವ ಭೂ ಉಪಯೋಗವನ್ನು ಹೊರತು ಪಡಿಸಿ ಯಾವುದೇ  ಅನ್ಯ ಉದ್ದೇಶಕ್ಕಾಗಿ ತಮ್ಮ ಭೂಮಿಯನ್ನು ಅಭಿವೃದ್ದಿಪಡಿಸಲು ಉದ್ದೇಶಿಸಿದಲ್ಲಿ ಅಂತಹ ಜಮೀನಿನ ಮಾಲೀಕರು ಅಥವಾ ಕಾನೂನುಬದ್ದ ಅಭಿವೃದ್ದಿದಾರರು, ಈ  ಪ್ರಾಧಿಕಾರಕ್ಕೆ ನಿಗದಿತ ಅಗತ್ಯ   ದಾಖಲೆಗಳೊಂದಿಗೆ ಅಜಿ೯ಯನ್ನು ಸಲ್ಲಿಸಬೇಕಾಗಿರುತ್ತದೆ. 
2. ಅಜಿ೯ದಾರರು ಕೋರಿದ ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಗಳು  ಯೋಜನಾ ತತ್ವಗಳಿಗೆ ಅಥವಾ  ಸಾವ೯ಜನಿಕ ಹಿತಾಸಕ್ತಿಗೆ ಅಥವಾ ಇತರೆ ಯಾವುದೇ ಶಾಸನಕ್ಕೆ ವಿರುದ್ದವಾಗಿಲ್ಲ ಎಂದು ಕಂಡುಬಂದಂತಹ  ಪ್ರಸ್ತಾವನೆಗಳನ್ನು ಒಂದು ಅಥವಾ ಹೆಚ್ಚಿನ ದಿನಪತ್ರಿಕೆಗಳಲ್ಲಿ ಪ್ರಕಟಿಸಿ, ಸಾವ೯ಜನಿಕರಿಂದ ಆಕ್ಷೇಪಣೆಗಳನ್ನು 15 ದಿನಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಆಹ್ವಾನಿಸಲಾಗುತ್ತದೆ.
3. ಪ್ರಾಧಿಕಾರವು ನಂತರ ಸಾವ೯ಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಅದರ ಪರಿಗಣನೆ ಅಥವಾ ಪರಿಗಣಿಸದಿರುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ವಿಷಯವನ್ನು ಮಂಡಿಸಿ, ಸಾವ೯ಜನಿಕರಿಂದ ಆಕ್ಷೇಪಣೆಗಳು ಸ್ವೀಕೃತವಾಗಿದ್ದಲ್ಲಿ ಅವುಗಳನ್ನು ಸಭೆಯಲ್ಲಿ ಚಚಿ೯ಸಿ ತೆಗೆದುಕೊಂಡ ನಿಣ೯ಯದಂತೆ ಅಗತ್ಯ ಕ್ರಮ ವಹಿಸಲಾಗುವುದು.  
4. ಪ್ರಾಧಿಕಾರವು ಪರಿಗಣಿಸಿರುವ ಭೂ ಉಪಯೋಗ ಬದಲಾವಣೆ ಪ್ರಕರಣಗಳನ್ನು ಅನುಮೋದನೆಗಾಗಿ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಢಿ ಪ್ರಾಧಿಕಾರ, ಬೆಂಗಳೂರು ರವರ ಮುಖಾಂತರ ಸಕಾ೯ರದ ಅನುಮೋದನೆಗಾಗಿ ಪ್ರಾಧಿಕಾರದ ಅಭಿಪ್ರಾಯದೊಂದಿಗೆ ಪ್ರಕರಣವನ್ನು ಸಲ್ಲಿಸಲಾಗುತ್ತದೆ.   ಸಕಾ೯ರದ ಅನುಮೋದನಾ  ಪತ್ರದಲ್ಲಿ ವಿಧಿಸಲಾಗಿರುವ ಷರತ್ತುಗಳಿಗೆ  ಪ್ರಾಧಿಕಾರ ಮತ್ತು ಜಮೀನಿನ ಮಾಲೀಕರು ಬದ್ದರಾಗಿರಬೇಕಾಗಿರುತ್ತದೆ.  

ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಗೆ ಸಲ್ಲಿಸಬೇಕಾಗಿರುವ ದಾಖಲಾತಿಗಳ ವಿವರ:
1.    ಮಾಲೀಕತ್ವದ ದಾಖಲೆಗಳು :- ಪ್ರಸ್ತಾಪಿತ ಜಮೀನುಗಳ ಮಾಲೀಕತ್ವಕ್ಕೆ ಸಂ¨ಂಧಿಸಿದ ದೃಢೀಕೃತ ಕ್ರಯ ಪತ್ರ/ ವಿಭಾಗ ಪತ್ರ/ ವಿಲ್/ ದಾನಪತ್ರ ಇತ್ಯಾದಿ ಪತ್ರದ ಪ್ರತಿಗಳು.
2.    ಜಿ.ಪಿ.ಎ. :- ಪ್ರಸ್ತಾಪಿತ ಜಮೀನುಗಳನ್ನು ಅಭಿವೃದ್ದಿ ಪಡಿಸಲು ಜಿಪಿ.ಎ. ಪಡೆದಿದಲ್ಲಿ ಸದರಿ ಜಿಪಿಎ ಪತ್ರದ ದೃಢೀಕೃತ ಪ್ರತಿಗಳು.
3.    ಇ.ಸಿ :- ಪ್ರಸ್ತಾಪಿತ ಜಮೀನುಗಳ ಮಾಲೀಕತ್ವಕ್ಕೆ ಸಂಬಂದಿಸಿದ ಕ್ರಯಪತ್ರ/ ವಿಭಾಗ ಪತ್ರ/ಇತ್ಯಾದಿಗಳನ್ನು ನೋಂದಾಯಿತ ದಿನದಿಂದ ಇಲ್ಲಿಯವರೆಗಿನ ಋಣಭಾರರಾಹಿತ್ಯ ಪ್ರಮಾಣ ಪತ್ರದ ಮೂಲ ಪ್ರತಿಗಳು.
4.    ಮ್ಯುಟೇಷನ್ :- ಪ್ರಸ್ತಾಪಿತ ಜಮೀನುಗಳ ಮ್ಯುಟೇಷನ್ ನ ಮೂಲ ಪ್ರತಿಗಳು.
5.    ಆರ್.ಟಿ.ಸಿ. :- ಪ್ರಸ್ತಾಪಿತ ಜಮೀನುಗಳ ಆರ್.ಟಿ.ಸಿ. ಮೂಲ ಪ್ರತಿಗಳು.
6.    ಸರ್ವೆ ನಕ್ಷೆ :- ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ದೃಢೀಕರಿಸಲ್ಪಟ್ಟ ಜಂಟಿ ಸರ್ವೆ ನಕ್ಷೆಯ ಮೂಲ ಪ್ರತಿ (ವಿಸ್ತೀರ್ಣ, ಚೆಕ್ಕುಬಂದಿ, ಖರಾಬುಗಳ ವಿಸ್ತೀರ್ಣ ಹಾಗೂ ಅವುಗಳ ನಿರ್ದಿಷ್ಠ ಸ್ಥಳ, ಅಕ್ಕಪಕ್ಕದಲ್ಲಿನ ಕೆರೆ, ಕಾಲುವೆ, ಅಧಿಕ ವಿದ್ಯುತ್ ವಾಹಕ ತಂತಿ ಹಾಗೂ ಸದರಿ ಜಮೀನಿಗೆ ಲಗತ್ತಾಗಿರುವ ಸಾರ್ವಜನಿಕ ರಸ್ತೆ ಸಂಪರ್ಕದ ಬಗ್ಗೆ ಸ್ಪಷ್ಟವಾಗಿ ಗುರ್ತಿಸಿ)
7.    ಗ್ರಾಮ ನಕ್ಷೆ :- ಪ್ರಸ್ತಾಪಿತ ಜಮೀನನ್ನು ನಿಖರವಾಗಿ ಗುರುತಿಸಲಾದ ಗ್ರಾಮ ನಕ್ಷೆಯನ್ನು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ದೃಢೀಕರಿಸಲ್ಪಟ್ಟ ಮೂಲ ಪ್ರತಿ.
8.    ರಸ್ತೆ ಸಂಪರ್ಕ ದೃಢೀಕರಣ ಪತ್ರ :- ಪ್ರಸ್ತಾಪಿತ ಜಮೀನುಗಳಿಗೆ ಸಾರ್ವಜನಿಕ ರಸ್ತೆ ಸಂಪರ್ಕವಿರುವ ಬಗ್ಗೆ ಸಂಬಂದಿಸಿದ ಇಲಾಖೆ/ ಸ್ಥಳೀಯ ಸಂಸ್ಥೆಗಳಿಂದ ಪಡೆಯಲಾದ ದೃಢೀಕರಣ ಪತ್ರದ ಮೂಲ ಪ್ರತಿ.
9.    ಘೋಷಣೆ ಪತ್ರ ಸಂಖ್ಯೆ: 01  :- ಪ್ರಸ್ತಾಪಿತ ಜಮೀನುಗಳನ್ನು ಯಾವುದಾದರೂ ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ ತದನಂತರ, ಸದರಿ ಭೂ ಸ್ವಾಧೀನದಿಂದ ಕೈಬಿಡಲಾಗಿದೆಯೇ ಎಂಬ ಬಗ್ಗೆ ಸ್ವತಃ (ಅರ್ಜಿದಾರರಿಂದ) ದೃಢೀಕರಿಸಿದ ಘೋಷಣೆ ಪತ್ರದ ಮೂಲ ಪ್ರತಿ.
10.    ಘೋಷಣೆ ಪತ್ರ ಸಂಖ್ಯೆ: 02 :- ಪ್ರಸ್ತಾಪಿತ ಜಮೀನುಗಳಿಗೆ ಸಂಬಂದಿಸಿದಂತೆ ನ್ಯಾಯಾಲಯದಲ್ಲಿ / ಲೋಕಾಯುಕ್ತ / ಇತರೆ ಯಾವುದೇ ಕಛೇರಿಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂಬ ಬಗ್ಗೆ ಅರ್ಜಿದಾರರಿಂದ ದೃಢೀಕರಿಸಿದ ಘೋಷಣೆ ಪತ್ರದ ಮೂಲ ಪ್ರತಿ (ನೋಟರಿ).
11.    ಘೋಷಣೆ ಪತ್ರ ಸಂಖ್ಯೆ: 03 :- ಸದರಿ ಭೂ ಉಪಯೋಗ ಬದಲಾವಣೆಗೆ ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಬಗ್ಗೆ ಸ್ಪಷ್ಠ ಮಾಹಿತಿಯನ್ನು ಹೊಂದಿರುವ ಘೋಷಣೆ ಪತ್ರ.
12.    ಗ್ರಾಮಪಂಚಾಯಿತಿಯಿಂದ ಪಡೆದ ದೃಢೀಕರಣ ಪತ್ರ :- ಪ್ರಸ್ತಾಪಿತ ಜಮೀನುಗಳನ್ನು ಉದ್ದೇಶಿತ ಉದ್ದೇಶಕ್ಕೆ ಅನುಮೋದಿಸಿದ ನಂತರ ಸದರಿ ಜಮೀನುಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲಾದ ಪ್ರದೇಶಗಳನ್ನು (ರಸ್ತೆ, ಉದ್ಯಾನವನ ಮತ್ತು ಬಯಲು ಜಾಗ ಹಾಗೂ ಇತ್ಯಾದಿಗಳು) ಸಂಬಂಧಿಸಿದ ಸ್ಥಳೀಯ ಸಂಸ್ಥೆಯು ನಿರ್ವಹಣೆ ಮಾಡುವ ಬಗ್ಗೆ ದೃಢೀಕರಣ ಪತ್ರ.
13.    ಪ್ರಮಾಣ ಪತ್ರ :- ಭೂ ಉಪಯೋಗ ಬದಲಾವಣೆ / ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರವು / ಪ್ರಾಧಿಕಾರವು ವಿಧಿಸಬಹುದಾದ ಷರತ್ತುಗಳು ಹಾಗೂ ಕಾನೂನುಗಳಿಗೆ ಒಳಪಟ್ಟಿರುವುದಾಗಿ ಅರ್ಜಿದಾರರು ಒಪ್ಪಿಗೆ ನೀಡಿರುವ ಪ್ರಮಾಣ ಪತ್ರದ ಮೂಲ ಪ್ರತಿ.
14.    ಹಾಲಿ ಬೆಳವಣಿಗೆಗಳನ್ನು ತೋರಿಸುವ ನಕ್ಷೆ :- ಪ್ರಸ್ತಾಪಿತ ಜಮೀನುಗಳ ಸುತ್ತಲಿನ 50 ಮೀ. ವ್ಯಾಪ್ತಿಯಂತೆ 500 ಮೀ. ವರೆಗಿನ ಪ್ರದೇಶದ ಹಾಲಿ ಬೆಳವಣಿಗೆಗಳನ್ನು ತೋರಿಸುವ ನಕ್ಷೆ (ಸ್ಥಳಸೂಚಿ ಮಾಹಿತಿಯೊಂದಿಗೆ)
15.    ಹಾಲಿ ಬೆಳವಣಿಗೆಗಳನ್ನು ತೋರಿಸುವ ಗೂಗಲ್ ನಕ್ಷೆ :- ಪ್ರಸ್ತಾಪಿತ ಜಮೀನುಗಳ ಸುತ್ತಲಿನ 50 ಮೀ. ವ್ಯಾಪ್ತಿಯಂತೆ 500 ಮೀ. ವರೆಗಿನ ಪ್ರದೇಶದ ಹಾಲಿ ಬೆಳವಣಿಗೆಗಳನ್ನು ತೋರಿಸಿರುವ ಗೂಗಲ್ ನಕ್ಷೆ.
16.    ಮಹಾಯೋಜನೆಯ ಉಧೃತ ಭಾಗ :- ಪ್ರಸ್ತಾಪಿತ ಜಮೀನುಗಳನ್ನು ಮಹಾಯೋಜನೆಯಲ್ಲಿ ಗುರ್ತಿಸಿದ ಉಧೃತ ಭಾಗ.
17.    ಛಾಯಾಚಿತ್ರಗಳು :- ಪ್ರಸ್ತಾಪಿತ ಜಮೀನುಗಳನ್ನು ತೋರಿಸುವ ಇತ್ತೀಚಿನ ಛಾಯಾಚಿತ್ರಗಳು.
18.    ಪಿ.ಟಿ.ಸಿ.ಎಲ್. :- ಪಿ.ಟಿ.ಸಿ.ಎಲ್. ಬಗ್ಗೆ ಉಪವಿಭಾಗಾಧಿಕಾರಿಗಳು, ದೊಡ್ಡಬಳ್ಳಾಪುರ ಉಪವಿಭಾಗ ರವರಿಂದ ಪಡೆದ ಹಿಂಬರಹದ ಪತ್ರ.

 

ಮೂಲ:ಹೊಸಕೋಟೆ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.