ಪ್ರಾಧಿಕಾರದ ಕಾರ್ಯ ಚಟುವಟಿಕೆಗಳು:

1.    ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾ ಯೋಜನೆ ತಯಾರಿಕೆ: ಯೋಜನಾ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುವ ಪಟ್ಟಣ ಮತ್ತು ಅಭಿವೃದ್ಧಿ ಪಥದಲ್ಲಿ ಇರುವ ಗ್ರಾಮಗಳ ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ಮಹಾ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರಂತೆ ಈ ಮಹಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವುದು ಹಾಗೂ ಅನುಷ್ಠಾನಗೊಳಿಸುವುದು.  ಅಲ್ಲದೆ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಹಳ್ಳಿಗಳಿಗೆ ಅಭಿವೃದ್ಧಿ ನಕ್ಷೆ ತಯಾರಿಸುವುದು.
2.    ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿಯಲ್ಲಿ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳಿಗೆ ತಾಂತ್ರಿಕ ನೆರವು ಮತ್ತು ಅಭಿಪ್ರಾಯ ನೀಡುವುದು.
3.    ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡುವ ಬಗ್ಗೆ ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡುವುದು.
4.    ಭೂ ಪರಿವರ್ತನೆ ಆಗಿರುವ ಜಮೀನುಗಳಿಗೆ ವಸತಿ, ವಾಣಿಜ್ಯ, ಕೈಗಾರಿಕಾ ಮತ್ತು ಇತರೆ ಉದ್ದೇಶದ ವಿನ್ಯಾಸ ಅನುಮೋದನೆ ಮತ್ತು ಅಭಿವೃದ್ಧಿ ನಕ್ಷೆಗೆ ಅನುಮೋದನೆ ನೀಡುವುದು ಮತ್ತು ಕಟ್ಟಡವನ್ನು ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರ ನೀಡುವುದು ಹಾಗೂ ಪ್ರಾರಂಭಿಕ ಪ್ರಮಾಣ ಪತ್ರ ನೀಡುವ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಅಭಿಪ್ರಾಯ ನೀಡುವುದು.
5.    ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಉಪಯೋಗಗಳನ್ನು ಹಾಗೂ ಬೆಳವಣಿಗೆಗಳನ್ನು ನಿಯಂತ್ರಿಸುವ ಸಂಬಂಧ ಸದರಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಧ್ಯಂತರ ಮಹಾ ಯೋಜನೆಯನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಯಾರಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಿದ್ದು, ಸದರಿ ಮಧ್ಯಂತರ ಮಹಾಯೋಜನೆಗೆ ದಿನಾಂಕ: 28.05.2009 ರಂದು ಸರ್ಕಾರದ ಅನುಮೋದನೆಯಾಗಿರುತ್ತದೆ.  ಸದರಿ ಅನುಮೋದಿತ ಮಧ್ಯಂತರ ಮಹಾ ಯೋಜನೆಯ ವಲಯ ನಿಯಮಾವಳಿಗಳಿಗನುಗುಣವಾಗಿ ಅಭಿವೃದ್ಧಿಗಳನ್ನು ನಿಯಂತ್ರಿಸಲಾಗುತ್ತಿತ್ತು. 
     ತದನಂತರ  ಪ್ರಾಧಿಕಾರದ ಸ್ಥಳೀಯ ಯೋಯೋಜನಾ ಪ್ರದೇಶಕ್ಕೆ ಸಿದ್ಧಪಡಿಸಲಾಗಿದ್ದ ಮಹಾಯೋಜನೆಗೆ ಸರ್ಕಾರದ ಆದೇಶ ಸಂಖ್ಯೆ: ನಅಇ 152 ಬಿಎಂಆರ್ 2013, ದಿನಾಂಕ: 16.09.2013 ರಲ್ಲಿ ತಾತ್ಕಾಲಿಕ ಅನುಮೋದನೆ ನೀಡಲಾಗಿರುತ್ತದೆ.  ನಂತರ ಸದರಿ ಯೋಜನಾ ಪ್ರದೇಶಕ್ಕೆ ಸಿದ್ದಪಡಿಸಲಾಗಿದ್ದ ಮಹಾಯೋಜನೆಗೆ ಸರ್ಕಾರದ ಆದೇಶ ಸಂಖ್ಯೆ: ನಅಇ 152 ಬಿಎಂಆರ್ 2013, ದಿನಾಂಕ: 30.01.2018 ರಲ್ಲಿ ಅಂತಿಮ ಅನುಮೋದನೆ ದೊರೆತಿದ್ದು, ಅಂದಿನಿಂದ ಅನುಮೋದಿತ ಮಹಾಯೋಜನೆಯ ಭೂ ಉಪಯೋಗ ಮತ್ತು ವಲಯ ನಿಯಮಾವಳಿಗಳಿಗನುಗುಣವಾಗಿ  ಅಭಿವೃದ್ಧಿಗಳನ್ನು ನಿಯಂತ್ರಿಸಲಾಗುತ್ತಿದೆ.

 

ಮೂಲ:ಹೊಸಕೋಟೆ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.