ಕಟ್ಟಡ ನಿಮಾ೯ಣದ ಸಲುವಾಗಿ ಪ್ರಾರಂಭಿಕ ಪ್ರಮಾಣ ಪತ್ರ ಪಡೆಯುವ ಕಾರ್ಯವಿಧಾನದ ಕುರಿತು:-

1.   ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟಡ ನಿಮಾ೯ಣದ ಸಲುವಾಗಿ ಪ್ರಾರಂಭಿಕ ಪ್ರಮಾಣ ಪತ್ರ ಪಡೆಯಲು ನಿವೇಶನದ ಮಾಲೀಕರು ತಮ್ಮ ಅಜಿ೯ಯ ಪ್ರತಿಯೊಂದಿಗೆ ಅಗತ್ಯ ದಾಖಲಾತಿ ಗಳನ್ನು ಸಲ್ಲಿಸಿ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಮುಖಾಂತರ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸತಕ್ಕದ್ದು.
2.    ಕಟ್ಟಡ ನಿರ್ಮಿಸಲು ಪ್ರಾರಂಭಿಕ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ತಮ್ಮ ಅಜಿ೯ಯೊಡನೆ  ಸಲ್ಲಿಸಲಾದ ಅಗತ್ಯ ದಾಖಲಾತಿಗಳನ್ನು  ಪರಿಶೀಲಿಸಿ ಪ್ರಾಧಿಕಾರದ ವತಿಯಿಂದ  ಅಗತ್ಯ ಕ್ರಮವಹಿಸಲಾಗುತ್ತದೆ.  3.    ಅರ್ಜಿದಾರರು ಸಲ್ಲಿಸಿರುವ ದಾಖಲೆಗಳಲ್ಲಿ / ಕಟ್ಟಡ ನಕ್ಷೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಸದರಿ   ವಿಷಯದ ಕುರಿತು ಪ್ರಾಧಿಕಾರದಿಂದ ಅರ್ಜಿದಾರರಿಗೆ ಪತ್ರದ  ಮುಖೇನ ತಿಳಿಸಲಾಗುವುದು.
4.    ಅರ್ಜಿಯೊಂದಿಗೆ ಸಲ್ಲಿಸಲಾದ  ದಾಖಲೆಗಳು ಸರಿಯಾಗಿದ್ದ ಪಕ್ಷದಲ್ಲಿ ಹಾಗೂ ಕಟ್ಟಡ ನಕ್ಷೆಯು ವಲಯ ನಿಯಮಾವಳಿಗಳನ್ವಯ ಸರಿ ಇದ್ದಲ್ಲಿ, ನಿಗದಿತ  ಶುಲ್ಕವನ್ನು ಪಾವತಿಸಿಕೊಂಡು ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ಪ್ರಾರಂಭಿಕ ಪ್ರಮಾಣ ಪತ್ರವನ್ನು ರವಾನಿಸಿ ಅಜಿ೯ದಾರರಿಗೆ ಮಾಹಿತಿಯನ್ನು ನೀಡಲಾಗುತ್ತದೆ. 
ಕಟ್ಟಡ ನಿರ್ಮಿಸಲು ಪ್ರಾರಂಭಿಕ ಪ್ರಮಾಣ ಪತ್ರ ಪಡೆಯುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ಈ ಕೆಳಕಂಡಂತಿರುತ್ತದೆ:-
1)    ಕ್ರಯಪತ್ರದ ಪ್ರತಿ 
2)    ಇತ್ತೀಚಿನ ಖಾತಾ ಪ್ರಮಾಣ ಪತ್ರ
3)    ಇ.ಸಿ. ಪ್ರಮಾಣ ಪತ್ರ
4)   ಸಾವ೯ಜನಿಕ ಸಂಪರ್ಕ ರಸ್ತೆಯ ಮಾಹಿತಿ / ದಾಖಲೆ
5)    ನಿವೇಶನವು ಅನುಮೋದಿತ ವಿನ್ಯಾಸದ ಭಾಗವಾಗಿದ್ದಲ್ಲಿ ಅನುಮೋದಿತ ವಿನ್ಯಾಸದ ನಕ್ಷೆ, ಆದೇಶದ ಪ್ರತಿ ಹಾಗೂ ನಿವೇಶನ ಬಿಡುಗಡೆ ಪ್ರಮಾಣ ಪತ್ರದ ಪ್ರತಿ. 
6)    ವಲಯ ನಿಯಮಾವಳಿಗಳಿಗೆ ಅನುಗುಣವಾಗಿ ಅಳತೆಗೆ ತಯಾರಿಸಿದ ಕಟ್ಟಡ ನಕ್ಷೆಯ 06 ಪ್ರತಿಗಳು (ನಿವೇಶನ ನಕ್ಷೆಯನ್ನೊಳಗೊಂಡಂತೆ)
7) ನಿರಾಕ್ಷೇಪಣಾ ಪತ್ರಗಳು:-
ಎ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಕ್ಷೇಪಣಾ ಪತ್ರ:- 
     i) ವಸತಿ ಸಮುಚ್ಛಯಗಳಲ್ಲಿ – 20 ಯೂನಿಟ್ ಮತ್ತು ಮೇಲ್ಪಟ್ಟ ಪ್ರಕರಣಗಳಲ್ಲಿ ಅಥವಾ ಕಟ್ಟಡದ ಬಿಲ್ಟ್ ಅಪ್ ಏರಿಯಾದ ವಿಸ್ತೀಣ೯ವು  2000 ಚ.ಮೀ. ಅಥವಾ ಅದಕ್ಕಿಂತ ಹೆಚ್ಚಾಗಿರುವ  ಪ್ರಕರಣಗಳಲ್ಲಿ 
    ii)    ವಾಣಿಜ್ಯ ಉದ್ದೇಶದ ನಿಮಾ೯ಣದ ಯೋಜನೆಗಳ ಕಟ್ಟಡಗಳ ಬಿಲ್ಟ್ ಅಪ್ ಏರಿಯಾದ ವಿಸ್ತೀಣ೯ವು  2000 ಚ.ಮೀ. ಅಥವಾ ಅದಕ್ಕಿಂತ ಹೆಚ್ಚಾಗಿರುವ  ಪ್ರಕರಣಗಳಲ್ಲಿ 

   iii)    ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳ ಬಿಲ್ಟ್ ಅಪ್ ಏರಿಯಾದ ವಿಸ್ತೀಣ೯ವು 5000 ಚ.ಮೀ. ಅಥವಾ ಅದಕ್ಕಿಂತ ಹೆಚ್ಚಾಗಿರುವ  ಪ್ರಕರಣಗಳಲ್ಲಿ  

ಬಿ) State Level Environmental Impact Assessment Authority (SEIAA) ಯಿಂದ ಪಡೆದ ನಿರಾಕ್ಷೇಪಣಾ ಪತ್ರವನ್ನು  ಕಟ್ಟಡಗಳ ಬಿಲ್ಟ್ ಅಪ್ ಏರಿಯಾದ ವಿಸ್ತೀಣ೯ವು 20,000 ಚ.ಮೀ.  ಕ್ಕಿಂತ ಹೆಚ್ಚಾಗಿದ್ದಲ್ಲಿ 
8) 15 ಮೀ. ಅಥವಾ ಅದಕ್ಕಿಂತ ಎತ್ತರದ ಕಟ್ಟಡದ ಪ್ರಕರಣಗಳಲ್ಲಿ ಸಲ್ಲಿಸಬೇಕಾಗಿರುವ ಅಗತ್ಯ ನಿರಾಕ್ಷೇಪಣಾ ಪತ್ರಗಳ ವಿವರ :-


ಎ) ಭಾರತೀಯ ವಾಯುಯಾನ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ.
ಬಿ) ಕೆಪಿಟಿಸಿಎಲ್ / ಬೆಸ್ಕಾಂನ ನಿರಾಕ್ಷೇಪಣಾ ಪತ್ರ.
ಸಿ) ಬಿಡಬ್ಲ್ಯೂಎಸ್ಎಸ್ ಬಿ/ಕೆಯುಡಬ್ಲ್ಯೂಎಸ್ಎಸ್ ಬಿ. ನ ನಿರಾಕ್ಷೇಪಣಾ ಪತ್ರ.
ಸಿ) ಟೆಲಿಕಾಂ / ಬಿಎಸ್ಎನ್ಎಲ್ ನ ನಿರಾಕ್ಷೇಪಣಾ ಪತ್ರ.
ಡಿ) ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರಾಕ್ಷೇಪಣಾ ಪತ್ರ.
9) ಕಟ್ಟಡದ ಸ್ಥಿರತೆ ಪ್ರಮಾಣ ಪತ್ರ (Structural Stability Certificate).

         

ಮೂಲ:ಹೊಸಕೋಟೆ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.